ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ ತನ್ನ ಕಾರ್ಯಾಚರಣೆಯ 90 ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಈ ಮೈಲುಗಲ್ಲಿನ ಗುರುತಾಗಿ ವರ್ಷವಿಡಿ ನಡೆಸುತ್ತಿರುವ ಕಾರ್ಯಕ್ರಮಗಳ ಭಾಗವಾಗಿ ರಾಷ್ಟ್ರವ್ಯಾಪಿ ಆರ್.ಬಿ.ಐ 90 ಕ್ವಿಜ್ ಎಂಬ ಸಾಮಾನ್ಯ ಜ್ಞಾನ ಆಧಾರಿತ ಸ್ಪರ್ಧೆಯನ್ನು ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ.
ಆರ್.ಬಿ.ಐ 90 ಕ್ವಿಜ್ ಕಾರ್ಯಕ್ರಮವು ತಂಡಗಳಿಗಾಗಿ ನಡೆಸುವ ಸ್ಪರ್ಧೆಯಾಗಿದ್ದು, ವಿವಿಧ ಹಂತಗಳಲ್ಲಿ ನಡೆಯುತ್ತದೆ. ಇದರ ಆನ್‍ಲೈನ್ ಹಂತವು ಸೆಪ್ಟೆಂಬರ್ 19 ರಿಂದ 21ರ ವರೆಗೆ ನಡೆಯಿತು. ಈ ಆನ್‍ಲೈನ್ ಹಂತದ ಪರಿಣಾಮವನ್ನು ಆಧರಿಸಿ ಕಾಲೇಜು ತಂಡಗಳನ್ನು ರಾಜ್ಯ ಮಟ್ಟದ ಸುತ್ತುಗಳಿಗೆ ಆಯ್ಕೆ ಮಾಡಲಾಯಿತು.
Also read: ಆಸ್ಟ್ರೇಲಿಯಾ ನಿಯೋಗದಿಂದ ಉನ್ನತ ಶಿಕ್ಷಣ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿ ಭೇಟಿ | ವಿಸ್ತೃತ ಚರ್ಚೆ
ಆರ್.ಬಿ.ಐ. ಕ್ವಿಜ್‍ನ ಕರ್ನಾಟಕ ರಾಜ್ಯದ ರಾಜ್ಯಮಟ್ಟದ ಸುತ್ತು ನವೆಂಬರ್ 14 ರಂದು ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ 180 ವಿದ್ಯಾರ್ಥಿಗಳಿಮದ ಕೂಡಿದ 90 ತಂಡಗಳು ಸ್ಪರ್ಧಿಸಿದ್ದವು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‍ನಲ್ಲಿರುವ ಪಿ.ಇ.ಎಸ್. ವಿಶ್ವವಿದ್ಯಾಲಯದ ಕಾಲೇಜಿನ ತಂಡದಿಂದ ದಿವ್ಯಾಂಶ್ ಶರ್ಮಾ ಮತ್ತು ಡಿ. ಭಾರ್ಗವರಾಮ ಶರ್ಮ ವಿಜೇತರಾಗಿ ಹೊರಹೊಮ್ಮಿದರು. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ ಮತ್ತು ಡಾ. ಎಂ.ವಿ. ಶೆಟ್ಟಿ ಕಾಲೇಜ್ ಆಫ್ ಫಿಸಿಯೋಥೆರಪಿ ಮಂಗಳೂರು ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ. ವಿಜೇತ ಮೊದಲ ಮೂರು ತಂಡಗಳಿಗೆ ಕ್ರಮವಾಗಿ ರೂ 2 ಲಕ್ಷ, ರೂ 1.50 ಲಕ್ಷ ಮತ್ತು ರೂ 1 ಲಕ್ಷಗಳ ಬಹುಮಾನವನ್ನು ವಿತರಿಸಲಾಯಿತು.
ವಿಜೇತ ತಂಡವು ನವೆಂಬರ್ 25 ರಂದು ಕೊಚ್ಚಿಯಲ್ಲಿ ನಡೆಯುವ ಝೋನಲ್ ವಿಭಾಗದಲ್ಲಿ ಭಾಗವಹಿಸಲಿದೆ. ಈ ಸ್ಪರ್ಧೆಯ ರಾಷ್ಟ್ರಮಟ್ಟದ ಅಂತಿಮ ಹಂತದ ಕ್ವಿಜ್ ಸ್ಪರ್ಧೆಯು ಡಿಸೆಂಬರ್ ಮಾಹೆಯಲ್ಲಿ ಮುಂಬೈನಲ್ಲಿ ನಡೆಯಲಿದೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post