ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಿನ್ನೆ ಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಕ್ಕೆ ಹರಿಸಿದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿದೆ.
ಅಣೆಕಟ್ಟೆಯಿಂದ ನಿನ್ನೆ ಅಪಾರ ಪ್ರಮಾಣದಲ್ಲಿ ನೀರನ್ನು ಹರಿಸಿದ್ದು, ನಿನ್ನೆ ರಾತ್ರಿಯಿಂದಲೇ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಇಂದು ಮುಂಜಾನೆ ವೇಳೆಗೆ ಸೇತುವೆ ಸಂಪೂರ್ಣ ಮುಳುಗಿದ್ದು, ನೀರು ರಸ್ತೆಯ ಮೇಲ್ಬಾಗಕ್ಕೆ ತಲುಪಿದೆ.
ಸೇತುವೆ ಮುಳುಗಿದ ಹಿನ್ನೆಲೆಯಲ್ಲಿ ಎರಡೂ ಭಾಗದಲ್ಲಿ ಬ್ಯಾರಿಕೇಟ್ ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗಿದೆ.
ನಗರದಲ್ಲಿ ಟ್ರಾಫಿಕ್ ಜಾಮ್, ಜನರು ತತ್ತರ
ಹೊಸ ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹಳೆಯ ಸೇತುವೆ ಮೇಲೆ ಮುಂಜಾನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಗರದ ಎರಡೂ ಭಾಗಗಳಿಗೆ ಸಂಪರ್ಕಿಸಲು ಈ ಸೇತುವೆಗಳು ಆಧಾರವಾಗಿದ್ದು, ಹೊಸ ಸೇತುವೆ ಮುಳಗಿದ ಹಿನ್ನೆಲೆಯಲ್ಲಿ ಹಳೆಯ ಸೇತುವೆಯ ಅವಲಂಬನೆ ಅನಿವಾರ್ಯ. ಹೀಗಾಗಿ, ಹಳೆಯ ಸೇತುವೆ ಮೇಲೆ ಮುಂಜಾನೆಯಿಂದಲೇ ಸಂಚಾರ ಒತ್ತಡ ಮಿತಿ ಮೀರಿದ್ದು, ಸೇತುವೆ ದಾಟಲು ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಹಿಡಿಯುತ್ತಿತ್ತು.
ಶಾಲಾ ಕಾಲೇಜು ವಾಹನಗಳು, ಕಚೇರಿ ಹಾಗೂ ಕಾರ್ಯಗಳಿಗೆ ತೆರಳುವವರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post