ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದೀಪಾರಾಧನೆಯಿಂದ ಕ್ಷೇಮವೂ ಆಗುತ್ತದೆ
ಹಿಂದೆ ನರಕಾಸುರ ವಧೆಯು ಅಶ್ವಯುಜ ಮಾಸದ ಕೃಷ್ಣ ಚತುರ್ದಶಿಯಂದು ನಡೆಯಿತು. ಅಲ್ಲಿಯವರೆಗೆ ಹಿಂದಿನಿಂದ ನಡೆಯುತ್ತಿದ್ದ ತೈಲಾಭ್ಯಾಂಗ ಸ್ನಾನವು ಅಂದಿನಿಂದ ನರಕ ಚತುರ್ದಶಿಯಾಯ್ತು. ಅಂದರೆ ನರಕಾಸುರನ ಬಾಧೆ ತೊಲಗಲು ಅದೆಷ್ಟೋ ಚತುರ್ದಶಿ ತೈಲಾಭ್ಯಾಂಗ(ಯಮಬಾಧೆ ನಿವಾರಣೆಗಾಗಿ) ಆಗಿರಬಹುದು. ಅದೇ ರೀತಿ ಲೋಕ ಕಂಠಕರನ್ನು, ಕಂಠಕಗಳನ್ನು ಹೊರದಬ್ಬಲು ನಾಶ ಮಾಡಲು ಕೆಲವೊಂದು ವಿಧಾನಗಳ ವೃತಗಳು ಭಾರತೀಯ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ. ಅಂತಹದ್ದರಲ್ಲಿ ದೀಪಜ್ಯೋತಿ ಬೆಳಗುವುದೂ ಒಂದಾಗಿದೆ. ದೀಪದ ಗುಣವೇ ಹಾಗೆ. ‘‘ದೀಪಂ ಹರತೇ ಪಾಪಾನಿ’’ ಎಂದಿದೆ ಶಾಸ್ತ್ರ ವಚನ. ದೀಪ ಬೆಳಗಿದರೆ ಕತ್ತಲು ಹೋಗುತ್ತಾ ಎಂದು ಕೇಳುವವರು ಮೂರ್ಖರು.
ಎಪ್ರಿಲ್ 5ನೇ ತಾರೀಕು, ರಾತ್ರಿ 9.09 ನಿಮಿಷಕ್ಕೆ ಈ ದೇಶದ ಪ್ರಧಾನಿ ದೇಶದ ಪ್ರಜೆಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದು ಸರಕಾರಿ ಆದೇಶವೇನಲ್ಲ. ವಿನಮ್ರ ವಿನಂತಿ. ಸಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರನ್ನು ಓಡಿಸಲು ಇಂತಹ ಅನೇಕ ಸಾಮೂಹಿಕ ಕ್ರಿಯೆಗಳಾಗಿತ್ತು. ಇದನ್ನು people movement ಎಂದು ವ್ಯಾಖ್ಯಾನಿಸಬಹುದು. ಗಂಟೆ ಗಟ್ಟಳೆ ಇದು ಯಾಕೆ, ಏನು ಎಂದು ಪ್ರಧಾನಿಗಳು ಹೇಳಬೇಕಾಗಿಲ್ಲ. ಒಂದೋ ನಂಬಿಕೆಯಿಂದ ಈ movementನಲ್ಲಿ ಪಾಲ್ಗೊಳ್ಳಿ ಅಥವಾ ತಿಳಿದುಕೊಂಡು ಪಾಲ್ಗೊಳ್ಳಿ ಎನ್ನುವುದು ನನ್ನ ಲೇಖನದ ಉದ್ದೇಶ.
ಜಾತವೇದ ಎಂಬುದು ಭೂಗರ್ಭದ ಅಗ್ನಿ. ಹೃದಯಾಂತರಾಳದ ಅಗ್ನಿ. ಇದನ್ನು ಬೇರೆ ಬೇರೆ ವಿಚಾರದಲ್ಲಿ ಬೇರೆ ಸಂಸ್ಕಾರದಲ್ಲಿ ಉಪಯೋಗಿಸಲಾಗುತ್ತದೆ. ಕಾರ್ಖಾನೆಯಲ್ಲಿ ಲೋಹ ಕರಗಿಸಲೂ ಅಗ್ನಿ ಬೇಕು. ಹಸಿ ಧಾನ್ಯ ಒಣಗಿಸಲೂ ಅಗ್ನಿ ಬೇಕು. ಕೊನೆಗೆ ಮಾನವನ ಶವ ದಹನಕ್ಕೂ ಅಗ್ನಿಯೇ ಬೇಕು. ಈ ಮಧ್ಯೆ ಇಂತಹ ಅಗ್ನಿಯನ್ನು ಸಂಸ್ಕಾರಯುತವಾಗಿ ಉರಿಸುವುದೇ ದೀಪ ಜ್ಯೋತಿ. ದೇವರ ಪೂಜೆಗೆ ದೀಪ ಉರಿಸಲೇಬೇಕು. ಸಭೆ ಸಮಾರಂಭಗಳಲ್ಲಿ ದೀಪ ಬೆಳಗುವ ಕಾರ್ಯವೇ ಆರಂಭದ ಸಂಕೇತ. ಇಂತಹ ದೀಪವನ್ನು ನಾವು ಭಕ್ತಿಶ್ರದ್ಧೆಯಿಂದ ರೋಗ ಮುಕ್ತರಾಗಲು ದೀಪಾರಾಧನೆ ಮಾಡಿ ಎಂದು ಹೇಳಿದವರು ನಮ್ಮ ಪ್ರಧಾನಿಗಳು. ಬಹುಷಃ ಈ ವರೆಗಿನ ಪ್ರಧಾನಿಗಳು ನಮ್ಮನ್ನು ಇಂತಹ ಪರಂಪರಾಗತ ಧಾರ್ಮಿಕತೆಗೆ ಒಯ್ಯಲಿಲ್ಲ ಅಥವಾ ಅಂತಹ ಅವಕಾಶ ಬರಲಿಲ್ಲವೇನೋ ಗೊತ್ತಿಲ್ಲ. ದೇಶವ್ಯಾಪಿ ಹಿಂಸಾಗ್ನಿ, ರೋಗಾಗ್ನಿಗಳು ತಾಂಡವವಾಡುತ್ತಿದೆ. ಈಗ ಇದನ್ನು ಶಮನ ಮಾಡಲು ದೀಪಾರಾಧನೆಯೊಂದೇ ದಾರಿ.
ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದೋ ಹುತಾಶನಾ
ಸುವರ್ಣಮನಲಂ ಸಮಿದ್ಧಂ ವಿಶತೋಮುಖಂ’
ಎಂದು ಅಗ್ನ್ಯಲಂಕರಣ ಹೇಳಿದೆ. ಅಂತಹ ಅಗ್ನಿಯನ್ನು ದೀಪ ಜ್ಯೋತಿಯಲ್ಲಿಟ್ಟು ಕೈ ಮುಗಿಯಿರಿ ಎನ್ನುವುದು ಖಂಡಿತವಾಗಿಯೂ ಸಾತ್ವಿಕತೆಯ ಒಂದು ಮಾರ್ಗ.
ಯಾರೋ ಮೂಢರು ಬಾಯಿಗೆ ಬಂದ ಹಾಗೆ ಒದರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೊಲಸು ಹಸ್ತಗಳಲ್ಲಿ ಹೊಲಸು ಭಾಷೆಯಲ್ಲಿ ಬರೆಯುತ್ತಾರೆ ಎಂದರೆ ಅದು ಸತ್ಸಂದೇಶವಾಗದು. ಅದು ಮತ್ಸರಯುಕ್ತ, ಮೂರ್ಖ ಸಂದೇಶವಾಗುತ್ತದೆ. ಕೀಟಗಳು ಬೆಂಕಿಗೆ ಹಾರುತ್ತಿದ್ದರೆ ಅವು ಸುಟ್ಟು ಹೋಗುತ್ತದೆ ಎಂಬರ್ಥವಲ್ಲದೆ, ಬೆಂಕಿ ಆರುತ್ತದೆ ಎಂದರ್ಥವಲ್ಲ.
ಹಿನ್ನೆಲೆ ಏನು ಹೇಳಿದೆ?
ಧರ್ಮಸ್ಥಳದಲ್ಲಿ ನಂದಾದೀಪ ಆರಿದೆ, ತಿರುಪತಿಯಲ್ಲಿ ದೀಪ ಆರಿಹೋಗಿದೆ ಎಂಬ ಸುಳ್ಳುವದಂತಿ ಹಬ್ಬಿಸಿದವರೇ ಈ ರೀತಿ ಠೀಕೆ ಮಾಡುತ್ತಾರೆ. ಆದರೆ ಜಗತ್ತಿನ ಪ್ರತಿಯೊಂದು ಆಗುಹೋಗುಗಳ ದ್ಯೂತ ಲಕ್ಷಣವನ್ನು ನೋಡುವ ಶಾಸ್ತ್ರ ಎಂದರೆ ಜ್ಯೋತಿಷ್ಯ ಶಾಸ್ತ್ರ ಮಾತ್ರ.
22 ನೇ ಮಾರ್ಚ್ ದಿನದಂದು ಏಕಕಾಲದಲ್ಲಿ ಸಂಜೆಗೆ ಗಂಟಾನಾದ ಮೊಳಗಿಸಲು ಕರೆ ಕೊಟ್ಟರು. ಏನಿಲ್ಲದಿದ್ದರೂ ಚಪ್ಪಾಳೆ ತಟ್ಟಿ ಎಂದರು. ಇದನ್ನು ಕರ್ನಾಟಕದ ಪ್ರಮುಖ ವ್ಯಕ್ತಿ ಸಿದ್ಧರಾಮಯ್ಯನವರೇ ಗೇಲಿ ಮಾಡಿದರು. ಆದರೆ ಜನರಿಗೆ ಅವರು ಅವರ ಸ್ವಾರ್ಥಕ್ಕಾಗಿ ಯಾವ ಯಾವ ಪೂಜೆ ಮಾಡಿಸುತ್ತಾರೆ ಎಂಬ ವಿಚಾರಗಳು ಗುಟ್ಟಾಗಿಯೇ ಇಟ್ಟಿದ್ದರು. ಕುಮಾರಸ್ವಾಮಿಯವರೂ ಅಷ್ಟೆ. ರಾಹುಲ್ ಗಾಂಧಿಯೂ ಅಷ್ಟೆ. ಅರ್ಥಾತ್ ನೀವೆಲ್ಲ ಎಷ್ಟು ದಿನ ನರಕವಾಸಿಗಳಾಗಿ ಇರುತ್ತೀರೋ ಅಷ್ಟು ದಿನ ನಾವು ರಾಜರಾಗಿ ಐಷಾರಾಮಿಯಾಗಿ ಇರುತ್ತೇವೆ ಎಂದರ್ಥ. ದೀಪ ಸಂಸ್ಕಾರ ರಹಿತರ ಓಲೈಕೆಗಾಗಿ ಇವರಾಡುವ ಮಾತಿದಷ್ಟೆ.
ಆಗಮಾರ್ತಂತು ದೇವಾನಾಂ
ನಿರ್ಗಮನರ್ತಂತು ರಕ್ಷಸಾಂ
ಎಂದು ಪೂಜಾರಂಭದಲ್ಲಿ ಗಂಟಾನಾದ ಮಾಡುವ ಕ್ರಮ. ನಂತರ ದೀಪ ಸಂಸ್ಕಾರ. ಇದಾದ ಮೇಲೆ ಓಂಕಾರಯುಕ್ತ ಮಂತ್ರ ಪಠಣ. ಇದಾದ ಮೇಲೆ ಆಹುತಿ. ಭಗವತಿಯ ಪೂಜೆಗೆ ಬಲಿಸಂಸ್ಕಾರ ಇರುವಲ್ಲಿ ರಕ್ತಬಲಿ ಆಗುತ್ತದೆ. ಈ ಕರೋನ ವ್ಯಾಧಿಯನ್ನು ಓಡಿಸಲು ಅದೂ ಬೇಕಾಗಬಹುದು. ನಂತರ ಕೊನೆಗೆ ಮಂಗಳಾರತಿಯೂ ಆಗುತ್ತದೆ. ಇಷ್ಟೆಲ್ಲ ಸಂಸ್ಕಾರಗಳಾದ ಮೇಲೆ ದೇವಿಯು ಪ್ರಸನ್ನಳಾಗಿ ರಕ್ತಬೀಜರನ್ನು ’ ಹೂಂ’ ಕಾರ ಮಾಡಿ ನಾಶ ಮಾಡುತ್ತಾಳೆ. ಇದೆಲ್ಲವೂ ದೈವ ಪ್ರೇರಣೆ. ಮೋದಿಯವರು ಸಂದೇಶ ನೀಡಲು ಕೇವಲ ನಿಮಿತ್ತ ಮಾತ್ರ. ನಾವು ದೀಪ ಬೆಳಗಲು ಒಂದು ನಿಮಿತ್ತಗಳಷ್ಟೆ. ಒಟ್ಟಿನಲ್ಲಿ ಜಗದ ಸ್ವಾಸ್ಥ್ಯ ನಮಗೆ ಬೇಕು ಎಂಬ ಸಂಕಲ್ಪ ನಮ್ಮಲ್ಲಿರಲಿ.
ಇಡೀ ಜಗತ್ತಿನಲ್ಲಿ ಭಾರತವು ಮಾತ್ರ ಕರ್ಮ ಭೂಮಿ. ಭಾರತೀಯ ಪರಂಪರೆಯೇ ದೀಪ ಬೆಳಗುವಂತದ್ದು. ಈ ಮದ್ಯದಲ್ಲಿ ಅಗ್ನಿ ಇಲ್ಲದೆ ದಫನವಾಗುವ ಅನ್ಯ ಮತೀಯರೂ ಇಲ್ಲಿದ್ದಾರೆ. ಅವರ ಓಲೈಕೆಗಾಗಿ ನಮ್ಮ ಕೆಲ ನಾಯಕರು ಪ್ರಜೆಗಳಿಗೆ ಅಡ್ಡದಾರಿ ಹಿಡಿಯಲು ಪ್ರೇರೇಪಿಸಬಹುದು. ಕೆಲ ಅವಿಚಾರವಾದಿ, ಕಪ್ಪನ್ನು ಬಿಳಿ ಎನ್ನುವ ಕೊಂಕು ಸಾಹಿತಿಗಳು, ನಟರು ದಾರಿ ತಪ್ಪಿಸಬಹುದು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕ್ರಿಯಾತ್ಮಕ- ಭಾವನಾತ್ಮಕ ಸಂಸ್ಕಾರ ಇರುವಂತದ್ದು ಸನಾತನ ಧರ್ಮದಲ್ಲಿ ಮಾತ್ರ. ಇಲ್ಲಿ ವೈದ್ಯರೂ ಬೇಕು ದೇವರೂ ಬೇಕು. ಅದಕ್ಕಾಗಿ ವೈದ್ಯೋ ನಾರಾಯಣೋ ಹರಿಃ ಎಂದರು. ಆದರೆ ಕೆಲ ಅನ್ಯ ಮತೀಯರು ಕೇವಲ ಭಾವನಾತ್ಮಕವಾಗಿ ಹೋರಾಡಲು ಹೊರಟಿದ್ದಾರೆ. ಅವರಲ್ಲಿ ಕ್ರಿಯಾತ್ಮಕತೆಗೆ ಬೆಲೆ ಇಲ್ಲ. ಅಲ್ಲಾಹು ರಕ್ಷಣೆ ಮಾಡುತ್ತಾನೆ ಎಂದು ಕೆಲ ಅಹಮದೀಯರ ಅಂಬೋಣ, ದೇವರಲ್ಲಿಗೆ ಕರೆದೊಯ್ಯುತ್ತೇನೆ. ಜಿಸಸ್ ಇದ್ದಾನೆ ಎಂದು ಕೆಲ ಇಸಾಯಿ ಗುರುಗಳ ಸಂದೇಶ ನೋಡಿರಬಹುದು. ಆದರೆ ಇವರಿಬ್ಬರಲ್ಲೂ ಕ್ರಿಯಾತ್ಮಕತೆ ಇಲ್ಲ. ಆದರೆ ಹಿಂದುಗಳಲ್ಲಿ ಎರಡೂ ಇರೋದ್ರಿಂದ ದೀಪ ಬೆಳಗಿಸಿ, ಅಂತರ ಕಾಪಾಡಿ ಎಂದು ಕರೆಕೊಟ್ಟರು. ಇದು ಫಲಕಾರಿಯೂ ಆಗುತ್ತದೆ.
ದಿನ ವಿಶೇಷ
ಎಪ್ರಿಲ್ 5 ರಾತ್ರಿ ಒಂಭತ್ತು ಗಂಟೆಗೆ ಪ್ರದೋಷ ಕಾಲ. ಶಿವನಿಗೆ ಅತ್ಯಂತ ಪ್ರಿಯವಾದ ಕಾಲ. ಜತೆಗೆ ಭಾನುವಾರವೂ ಆಗಿದೆ. ಆದರೆ ಈ ದಿನ ತುಂಬಾ ಕೆಟ್ಟ ದಿನವೂ ಹೌದು.
ದ್ವಾದಶೀ ಅರ್ಕವಾಸರೇ ದಗ್ಧ ಯೋಗಃ
ಅಂದರೆ ಈ ದಿನ ದಗ್ಧ ಯೋಗ. ದಗ್ಧ ಎಂದರೆ ಸುಟ್ಟದ್ದು (burning day) ಎಂಬ ಅರ್ಥವಿದೆ. ಆದರೆ ಇಂತಹ ಕಾಲದಲ್ಲೇ ದೇವತಾ ಪ್ರಾರ್ಥನೆ, ದೀಪಾರಾಧನೆ ಮಾಡಿದಾಗ ದೋಷ ಹೋಗುತ್ತದೆ. ಒಂದು ವೇಳೆ ಮಾಡಿಲ್ಲ ಅಂದರೆ ಕೆಟ್ಟದ್ದನ್ನು ನೋಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತಿಲ(ಎಳ್ಳೆಣ್ಣೆ) ದೀಪ ಉರಿಸಿದರೆ ಅದು ಅಶ್ವಿನೀ ದೇವತೆಗಳಿಗೆ(ಅಶ್ವಿನೀ ದೇವತೆಗಳು ಪ್ರಕೃತಿಯ ವೈದ್ಯರು) ಪ್ರೀತ್ಯರ್ಥವಾಗಿ ರೋಗ ಮುಕ್ತ ಭಾರತವನ್ನಾಗಿಸುವುದರಲ್ಲಿ ಸಂಶಯವಿಲ್ಲ.
Get in Touch With Us info@kalpa.news Whatsapp: 9481252093
Discussion about this post