ಬೆಂಗಳೂರು: ನಗರದ ಅತ್ಯಂತ ಹಳೆಯ ಬಡಾವಣೆ ಚಾಮರಾಜಪೇಟೆ ಎರಡನೇ ಅಡ್ಡರಸ್ತೆಯಲ್ಲೊಂದು ತಿಂಡಿ ಕೇಂದ್ರವಿದೆ, ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರು ಕನ್ನಡದ ಸೊಗಡು ಇಲ್ಲಿ ಕಾಣಸಿಗುವುದು.
ಜೀವನೋಪಾಯಕ್ಕಾಗಿ ಇದನ್ನು ನಡೆಸುತ್ತಿರುವ ಕ.ವೆಂ. ರಾಮಚಂದ್ರ ಕಾಯಕವೇ ಕೈಲಾಸವೆಂದು ನಂಬಿ ನಡೆಯುತ್ತಿದ್ದಾರೆ. ಮಧ್ಯಮ ವರ್ಗದ ನೆಚ್ಚಿನ ತಾಣವಾದ ಈ ಕನ್ನಡ ತಿಂಡಿ ಕೇಂದ್ರದಲ್ಲಿ ಆಟೋ ಚಾಲಕರು, ಸೇಲ್ಸ್ ಮ್ಯಾನ್ ಇಲ್ಲಿನ ಖಾಯಂ ಗಿರಾಕಿಗಳು.
ಕನ್ನಡದ ಮೇಲಿನ ಇವರ ಅಪಾರ ಪ್ರೀತಿ ಇದರ ಆರಂಭಕ್ಕೆ ನಾಂದಿ. ಶುಚಿ- ರುಚಿಯಾದ ತಿನಿಸುಗಳು ಕಡಿಮೆ ಬೆಲೆಗೆ ದೊರೆಯುತ್ತದೆ. ಮನೆ ರುಚಿಯಂತಿರುತ್ತದೆ 30 ರೂಪಾಯಿಗೆ ಇಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು ಎನ್ನುವುದು ಇಲ್ಲಿನ ವಿಶೇಷ.
ಕನ್ನಡದ ರುಚಿ ಹಂಚುವ ಕಾಯಕ
ಇದಿಷ್ಟೆ ಅಲ್ಲದೆ ಕನ್ನಡದ ರುಚಿ ಹಂಚುವ ಕಾಯಕವನ್ನು ಮಾಡುತ್ತಿರುವ ಕನ್ನಡದ ಕಟ್ಟಾಳು ರಾಮಚಂದ್ರ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜೊತೆಯಲ್ಲಿ ಮಾತನಾಡಿ, ಬೆಂಗಳೂರಿಗರಲ್ಲಿ ಕನ್ನಡಾಭಿಮಾನ ಕ್ಷೀಣಿಸುತ್ತಿದೆ. ಹೀಗಾಗಿ, ಹೋಟೆಲ್‌ನಲ್ಲಿ ಕನ್ನಡ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಉಚಿತವಾಗಿ ನೀಡುವ ಪರಿಪಾಠ ಆರಂಭಿಸಿದ್ದೇನೆ ಎನ್ನುತ್ತಾರೆ.
ಇಲ್ಲಿ ಒದಗಿಸುವ ತಿಂಡಿಗಳಿಗೆ ಕನ್ನಡ ಸಾಹಿತಿಗಳ ಹೆಸರನ್ನಿಟ್ಟಿರುವ ವಿಶೇಷ ಬಗೆಯ ಮೆನು ನೋಡಿ ಮಕ್ಕಳು ಆಕರ್ಷಿತರಾಗಿದ್ದಾರೆ. ಹೊಟೇಲ್’ಗೆ ಬಂದಾಗ ರಾಜಕುಮಾರ್ ಮಸಾಲೆ ದೋಸೆ ಕೊಡಿ ಎಂದು ಕೇಳುವಾಗಲೆ ಸ್ವಾಭಿಮಾನ ಸಂಭ್ರಮದಿಂದ ಕೇಳುತ್ತಾರೆ ಎನ್ನುವುದೇ ಖುಷಿ ತರುವ ವಿಚಾರವೆನ್ನುವ ಸ್ನೇಹಜೀವಿಗೆ, ಅಣ್ಣ ಅಶ್ವತ್ಥ್’ನಾರಾಯಣ ಮತ್ತು ಬಾಣಸಿಗರಾದ ಆನಂದ್ ಮತ್ತು ರತ್ನಾಕರ್ ಬೆಂಬಲವಾಗಿದ್ದಾರೆ.
ಕನ್ನಡ- ಅನ್ನ- ಅಂಗಾಂಗ ದಾನ ಪ್ರಧಾನ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನೊಂದವರ ಜೀವಪರ ಚಿಂತನೆಯಿಂದ ಮರಣಾ ನಂತರ ಅಂಗಾಂಗ ದಾನದ ಬಗ್ಗೆ ನಾಗರಿಕರಲ್ಲಿ ಅರಿವನ್ನುಂಟು ಮಾಡುವ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ರಾಯಭಾರಿಯಾಗಿ ದುಡಿಯುತ್ತಿರುವ ಸಾಧಕನ ಕಾರ್ಯ ಅಭಿನಂದನೀಯ. ಉತ್ತಮ ಸಾರ್ವಜನಿಕ ಸೇವೆ ಸಲ್ಲಿಸಿದ ಪೌರ ಕಾರ್ಮಿಕರು, ಆಟೋ ಚಾಲಕರು, ಪತ್ರಿಕಾ ವಿತರಕರು, ಬೆ.ವಿ.ಕಂ ಹಾಗೂ ಜಲಮಂಡಳಿ ನೌಕರರು ವಿಶೇಷವಾಗಿ ತೆರೆಮರೆಯಲ್ಲಿ ನಿಸ್ವಾರ್ಥವಾಗಿ ಸೇವಾ ಕೈಂಕರ್ಯ ಮಾಡುವ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಸಿಬ್ಬಂದಿಗೆ ಗೌರವ ಸಮರ್ಪಿಸುವ ಮೂಲಕ ವಿಶಿಷ್ಟ ಬಗೆಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದ್ದಾರೆ.
ಇಂತಹ ವಿಭಿನ್ನ ಸಾಧಕರನ್ನು ಅಭಿನಂದಿಸಲು ಕರೆ ಮಾಡಿ: 9342921229
Get In Touch With Us info@kalpa.news Whatsapp: 9481252093, 94487 22200
Discussion about this post