ಶಿವಮೊಗ್ಗ: ಕಟೀಲ್ ಅಶೊಕ್ ಪೈ ಸ್ಮಾರಕ ಕಾಲೇಜಿನಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.
ಮಾನಸ ಟ್ರಸ್ಟ್‌ನ ಈ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನುರಿತ ಬೋಧಕ ವರ್ಗವನ್ನು ಹೊಂದಿದ್ದು, ವಿದ್ಯಾರ್ಥಿ ಆಯ್ಕೆ ಮಾಡುವ ಐಚ್ಛಿಕ ವಿಷಯಗಳಲ್ಲಿ ಉತ್ತಮ ಸೈದ್ದಾತಿಕ ಮತ್ತು ಪ್ರಾಯೋಗಿಕ ಕಲಿಕೆಗೆ ಒತ್ತನ್ನು ನೀಡಲಾಗಿದೆ.
ವಿದ್ಯಾರ್ಥಿಯು ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಲು ಸಂಪೂರ್ಣ ಅವಕಾಶವಿದ್ದು, ವಿವಿಧ ಚಟುವಟಿಕೆಗಳ ಮೂಲಕ ಸರ್ವೋತೋಮುಖ ಅಭಿವೃದ್ಧಿಗೆ ಅವಕಾಶ ಹೊಂದಿದ್ದಾರೆ.
ಈಗಾಗಲೇ ಹಲವು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿ ಪರಿಣಿತರಿಂದ ಸೈ ಎನಿಸಿಕೊಂಡಿರುವುದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿರುತ್ತದೆ.
ಇಂಗ್ಲೀಷ್ ಭಾಷೆ ಕಲಿಕೆ, ಕಂಪ್ಯೂಟರ್ ತರಬೇತಿ ವೃತ್ತಿಪರ ಕೌಶಲ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿಯಂತಹ ವಿಶೇಷ ತರಗತಿಗಳು ಪ್ರತಿ ವಿದ್ಯಾರ್ಥಿಗೆ ದೊರೆಯುವ ವಿಶೇಷ ಸೌಲಭ್ಯಗಳಾಗಿವೆ. ನಾಟಕ, ಕಿರು ಚಿತ್ರ ತಯಾರಿ ಹಾಗೂ ದೃಶ್ಯ ಮಾಧ್ಯಮಗಳ ಕುರಿತಂತೆ ಕಾರ್ಯಗಾರಗಳ ಮೂಲಕ ವಿಶೇಷ ಅನುಭವವು ವಿದ್ಯಾರ್ಥಿಗಳಿಗೆ ದೊರಕುತ್ತದೆ. ಆರ್ಟ್ಸ್, ಕಾಮರ್ಸ್ ಅಥವಾ ಸೈನ್ಸ್ ವಿಷಯದೊಂದಿಗೆ ಪಿ.ಯು.ಸಿ. ಅಥವಾ ಐ.ಟಿ.ಐ ಯಾ ಡಿಪ್ರೋಮೊ ಮುಗಿಸಿದ ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಮನಃಶಾಸ್ತ್ರದೊಂದಿಗೆ ಪತ್ರಿಕೋದ್ಯಮ- ಇಂಗ್ಲೀಷ್ ಐಚ್ಛಿಕ, ಸಮಾಜಶಾಸ್ತ್ರ-ಇಂಗ್ಲೀಷ್ ಇಚ್ಚಿಕ , ಇತಿಹಾಸ- ರಾಜ್ಯಶಾಸ್ತ್ರ ಅಥವಾ ಇತಿಹಾಸ-ಅರ್ಥಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಅಲ್ಲದೇ ಬಿ.ಎಸ್.ಡಬ್ಲೂ (ಸಮಾಜಕಾರ್ಯ) ಪದವಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಶೈಕ್ಷಣಿಕ ಸಾಲಿಗೆ ಪ್ರವೇಶ ಬಯಸುವವರಿಗೆ ಅರ್ಜಿಗಳನ್ನು ನೀಡಲಾಗುತ್ತಿದ್ದು ಭರ್ತಿ ಮಾಡಿದ ಅರ್ಜಿಗಳನ್ನು ಏಪ್ರಿಲ್ 19ರ ಒಳಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಏಪ್ರಿಲ್ 21ರ ಬೆಳಗ್ಗೆ10.30ಕ್ಕೆ ಅಥವಾ ಮೇ 19ರಬೆಳಗ್ಗೆ 10.30ಕ್ಕೆ ಪ್ರವೇಶಾತಿ ಪರೀಕ್ಷೆಯನ್ನು ಬರೆಯಲು ಸೂಚಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ(08182 401088 ಮೋ: 9448288483,/9480034495) ಮೂಲಕ ಸಂಪರ್ಕಿಸಲು ಪ್ರಾಂಶುಪಾಲರು ಕೋರಿದ್ದಾರೆ.
Discussion about this post