ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಣ್ಯ ಸಚಿವರು ಆಗಸ್ಟ್ 5ರಂದು ನೀಡಿದ ಆದೇಶ ಮಲೆನಾಡಿನ ರೈತರಲ್ಲಿ ಅನ್ನ ಕಸಿಯುವ ಆತಂಕ ಸೃಷ್ಟಿಯಾಗಿದೆ. ಆದರೆ ಈಗ ರೈತರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಕಾನೂನು ಉಲ್ಲಂಘನೆಗೂ ಸಿದ್ಧ ಎಂದು ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ #Araga Gnanendra ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2015ರ ನಂತರ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸಲಾಗುತ್ತದೆ ಎಂಬ ಅರಣ್ಯ ಸಚಿವರ ಸೂಚನೆ ಹಾಗೂ ಇತ್ತೀಚೆಗೆ ವೈನಾಡು ಮತ್ತು ಕೆಲವೆಡೆ ಗುಡ್ಡ ಕುಸಿತದ ಘಟನೆಯ ನಂತರ ಅದೇ ನೆಪವೊಡ್ಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಲವು ವರ್ಷಗಳ ಸಾಗುವಳಿ ದಾಖಲೆ ಇದ್ದರೂ ಸಹ ಏಕಾಏಕಿ ಬಗರ್‍ಹುಕುಂ ಸಾಗುವಳಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಮಲೆನಾಡು ರೈತರು ಪ್ಯಾನಿಕ್ ಆಗಿದ್ದಾರೆ ಎಂದರು
ಅರಣ್ಯಾಧಿಕಾರಿಗಳು ಅಲ್ಲಲ್ಲಿ ತೆರವು ಮಾಡಿಸುತ್ತಿದ್ದಾರೆ. ಆದರೆ ಬಗರ್ ಹುಕುಂ ಸಾಗುವಳಿ ಶ್ರಮಜೀವಿಗಳ ಅನ್ನ ಕಸಿಯಲು ಬಿಜೆಪಿ ಬಿಡಲ್ಲ. ಬದುಕು ಕಟ್ಟಿಕೊಳ್ಳಲು ಮಾಡಿರುವ ಸಾಗುವಳಿ ತೆರವಿಗೆ ಬಂದರೆ ಅಡ್ಡ ತಡೆಯುತ್ತೇವೆ. ಯಡಿಯೂರಪ್ಪ ಬಗರ್‍ಹುಕುಂ ಸಾಗುವಳಿದಾರರ ಪರ ಹೋರಾಟ ಮಾಡಿ ಬಂದವರು. ನಮ್ಮ ಪಕ್ಷ ರೈತರನ್ನು ಎಂದು ಕೈಬಿಡುವುದಿಲ್ಲ ಎಂದರು.
Also read: ಬೆಂಗಳೂರಿನಲ್ಲಿ ಸತತ ಮಳೆ | ಹಲವು ರಸ್ತೆಗಳು ಜಲಾವೃತ
ಮಲೆನಾಡು ಭಾಗದ ಶಾಸಕರ ಸಭೆ ಕರೆದು ಸಚಿವ ಪ್ರಕಾಶ್ ಖಂಡ್ರೆ #Minister Eshwar Khandre ಚರ್ಚೆ ಮಾಡಲಿ, ಅವರು ಬಯಲುಸೀಮೆ ಪ್ರದೇಶದವರು. ಇಲ್ಲಿನ ಸಮಸ್ಯೆ ಪರಿಚಯ ಅವರಿಗೆ ಇರಲ್ಲ. ಸಭೆ ಕರೆಯಲು ಒಪ್ಪಿದ್ದಾರೆ, ಆದರೆ ಕರೆದಿಲ್ಲ.ಪಹಣಿಯಲ್ಲಿ ಬಗರ್‍ಹುಕುಂ ಭೂಮಿ ರೆವಿನ್ಯೂ ಅಂತ ಇದೆ. ಅದನ್ನು ಮಂಜೂರು ಮಾಡಿದ್ದಾರೆ. ಈಗ ಆ ಮಂಜೂರಾತಿ ರದ್ದು ಮಾಡಲು ಅರಣ್ಯ ಇಲಾಖೆ ಎಸಿ ಕೋರ್ಟ್‍ಗೆ ಹೋಗಿದ್ದಾರೆ. ಇದನ್ನು ಇಂಡೀಕರಣ ಮಾಡಿರಲಿಲ್ಲ. ಇಂಡೀಕರಣ ಪ್ರಕ್ರಿಯೆ ಈಗ ಶುರು ಮಾಡಿದ್ದಾರೆ. ಆದರೆ ನೋಟಿಫಿಕೇಶನ್ ಆಗಬೇಕು ಪೆÇಸಿಶನ್ ಯಾರಿದ್ದಾರೆ ನೋಡಬೇಕು. ಮನಬಂದಂತೆ ಕಾಯಿದೆ ದುರುಪಯೋಗ ಆಗುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದರು.
ಭೂ ಕುಸಿತಕ್ಕೆ ಬಗರ್ ಹುಕುಂ ರೈತ ಕಾರಣ ಅಲ್ಲ. ಇಲಾಖೆ ಮಾಡಿರುವ ಅವೈಜ್ಞಾನಿಕ ಕಾಮಗಾರಿ ಕಾರಣ. ಗುಡ್ಡದಲ್ಲಿ ಇಂಗುಗುಂಡಿ ಮಾಡುತ್ತಿದ್ದಾರೆ. ದುಡ್ಡು ಹೊಡೆಯಲು ಕೆಲ ಕಾಮಗಾರಿ ಮಾಡಿದ್ದು, ಇದರಿಂದ ನೀರು ಇಂಗಿ ಗುಡ್ಡ ಕುಸಿತ ಆಗುತ್ತಿದೆ. ವೈಜ್ಞಾನಿಕ ಕಾಮಗಾರಿ ಮಾಡಿಲ್ಲ, ಯಾರ ಜಮೀನು ಗೊತ್ತಿಲ್ಲ. ಅರಣ್ಯ ಇಲಾಖೆ ನಮ್ಮದು, ಕಂದಾಯ ಇಲಾಖೆ ನಮ್ಮದು ಅಂತಾರೆ. ನಗರ ಹೋಬಳಿ ಕರಿಮನೆ ಗ್ರಾಮದಲ್ಲಿ ತಪ್ಪಾಗಿ ಪಿಎಫ್ ಅಂತ ಹಾಕಿದ್ದಾರೆ. ಅದನ್ನು ತೆಗೆಸಲು ಆಗುತ್ತಿಲ್ಲ. ಹತ್ತು ವರ್ಷ ಆಗಿದೆ. ಈ ರೀತಿ ಭಯಭೀತಿ ವಾತಾವರಣ ಇದೆ. ಇಲ್ಲಿ ವಾಸ ಇರುವವರಿಗೆ ಹಿಂಸೆಯಾಗುತ್ತಿದೆ ಇದು ಆಗಬಾರದು. ದಟ್ಟ ಅರಣ್ಯ ಘೋಷಣೆ ಮಾಡಲು ತಕರಾರು ಇಲ್ಲ, ಆದರೆ ಪ್ರಭಾವಿಗಳು ರೆಸಾರ್ಟ್ ಮಾಡಿದ್ದಾರೆ. ಹಿಂದೆ ಅರಣ್ಯ ಇಲಾಖೆ ಬದುಕಿರಲಿಲ್ವ ಎಂದು ಪ್ರಶ್ನಿಸಿದರು.
ಹೊಸ ಒತ್ತುವರಿ ತೆರವಿಗೆ ವಿರೋಧ ಇಲ್ಲ. ಪರಿಸರವೂ ಉಳಿಯಬೇಕು.ಅರಣ್ಯ ಇಲಾಖೆ ಹುಚ್ಚು ಕುದುರೆ ರೀತಿ ಆಡುತ್ತಿದೆ. ಮಂತ್ರಿಗಳು, ಕೋರ್ಟ್ ಹೇಳಿದರು ಅಂತ ತೆರವು ಮಾಡಲಾಗುತ್ತಿದೆ. ಅರಣ್ಯ ಸಚಿವರು ಬೇಗ ಸಭೆ ಕರೆಯಲಿ, ಕಸ್ತೂರಿ ರಂಗನ್ ವರದಿ ಗೊಂದಲವಿದೆ. ಸಿಎಂ ಈ ವರದಿಯನ್ನು ಒಪ್ಪುವುದಿಲ್ಲ ಎನ್ನುತ್ತಿದ್ದಾರೆ. ಆದರೆ ಅರಣ್ಯ ಸಚಿವರು ಜಾರಿಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಅಧಿಸೂಚನೆ ಆಗಿದೆ. ಅದಕ್ಕೆ ರಾಜ್ಯ ಸರ್ಕಾರ ತಕರಾರು ಸಲ್ಲಿಸಬೇಕು. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಅವರೊಬ್ಬರು ಇಸ್ರೋ ವಿಜ್ಞಾನಿ. ಯಾವ ಊರಿಗೂ ಭೇಟಿ ಕೊಡದೇ ಸ್ಯಾಟಿಲೈಟ್ ಮೂಲ ಆಧÀರಿಸಿ ವರದಿ ಕೊಟ್ಟಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಹಸಿರು ಪೀಠದ ಮುಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ ಅವೈಜ್ಞಾತಿಕ ವರದಿಯನ್ನು ತಿರಸ್ಕರಿಸಿ ಬಗರ್‍ಹುಕುಂ ಸಾಗುವಳಿ ರೈತರ ಪರ ನಿಲ್ಲಬೇಕು ಎಂದರು. ಬೆಳಗಾವಿಯ ಬಿಜೆಪಿ ನಾಯಕರ ಸಭೆ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಏನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಕರಾದ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಜಿಲ್ಲಾ ಕಾರ್ಯದರ್ಶಿಗಳಾದ ಹರಿಕೃಷ್ಣ, ಶಿವರಾಜ್, ಮಾಲತೇಶ್, ಪ್ರಮುಖರಾದ ವಿನ್ಸೆಂಟ್, ಭವಾನಿ ರಾವ್ ಮೋರೆ, ಚಂದ್ರಶೇಖರ್, ಅಣ್ಣಪ್ಪ, ಸುಮಾಲತಾ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post