Sunday, September 6, 2026
Advertisement
ADVERTISEMENT

ರಾಜಕೀಯ

ಬಿಜೆಪಿ ರಾಜ್ಯ ಕಾರ್ಯಕಾರಣಿ: ಇಂದಿನ ಪ್ರಮುಖ ಅಂಶಗಳು

ಬೆಳಗಾವಿ, ಅ.4: ಯಾವುದೇ ರಾಜ್ಯ ಸರ್ಕಾರಗಳು ಅಂತರ್ರಾಜ್ಯ ವಿವಾದಗಳಲ್ಲಿ ಬಯಸಿದರೆ ಮಾತ್ರಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಖಾತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನ್ಯಾಯಾಲಯದ ಸೂಚನೆಯಂತೆ ವಿವಾದಿತ...

Read moreDetails

ಎಸ್ ಸಿ, ಎಸ್ ಟಿ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಚೀನಾ ಪ್ರವಾಸವಂತೆ

ಬೆಂಗಳೂರು, ಅ.4: ಪರಿಶಿಷ್ಟ ಜಾತಿ ಮತ್ತು ಪಂಗಡದ 2,500 ಕೃಷಿ ಕಾರ್ಮಿಕರಿಗೆ ಒಂದು ವಾರ ಕಾಲ ಚೀನಾ ದೇಶದಲ್ಲಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ತಿಳಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆಯಡಿ ಮೀಸಲಿಟ್ಟ...

Read moreDetails

ಕಾವೇರಿ: ವಸ್ತು ಸ್ಥಿತಿ ಅಧ್ಯಯನ ನಡೆಸಲು ಕೋರ್ಟ್ ಸೂಚನೆ: ಇಂದಿನ ಸಂಪೂರ್ಣ ಸುದ್ಧಿ

ಬೆಂಗಳೂರು,ಅ.4: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ಹಿಡಿದಿರುವ ಸುಪ್ರೀಂಕೋರ್ಟ್, ತಮಿಳುನಾಡಿಗೆ 11 ದಿನ ಒಟ್ಟು 22 ಸಾವಿರ ಕ್ಯೂಸೆಕ್ ನೀರು ಹರಿಸಬೇಕು, ಕೇಂದ್ರ ಜಲ ಆಯೋಗದ ನೇತೃತ್ವದಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಸಬೇಕು ಮತ್ತು ಹೊಸ ತಾಂತ್ರಿಕ ಉನ್ನತ ಅಧಿಕಾರ ಸಮಿತಿ...

Read moreDetails

ಜಯಲಲಿತಾ ಅನಾರೋಗ್ಯ ಕುರಿತು ಮಾಹಿತಿ ನೀಡಿ: ಕೋರ್ಟ್

ಚೆನ್ನೈ, ಅ.4: ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ಕುರಿತಾಗಿ ನಾಳೆಯೊಳಗೆ ಮಾಹಿತಿ ನೀಡಿ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಜಯಲಲಿತಾ ಅನಾರೋಗ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ...

Read moreDetails

ನಾರಿಮನ್ ಮನವೊಲಿಸಿದ ರಾಜ್ಯ ಸರ್ಕಾರ

ನವದೆಹಲಿ, ಅ.4: ರಾಜ್ಯ ವಿಧಾನಮಂಡಲದಲ್ಲಿ ನನಗೆ ಅವಮಾನವಾಗಿದೆ ಎಂದು ಮುನಿಸಿಕೊಂಡಿದ್ದ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನು ರಾಜ್ಯ ಸರ್ಕಾರ ಮನವೊಲಿಸಿದ್ದು, ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಕರ್ನಾಟಕ ವಿಧಾನಮಂಡಲದಲ್ಲಿ ನನಗೆ ಅವಮಾನ ಮಾಡಿದ್ದಾರೆ...

Read moreDetails

ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಖಭಂಗ: ರಿಯಲ್ ಎಸ್ಟೇಟ್ ವಿಧೇಯಕ ತಿರಸ್ಕಾರ

ಬೆಂಗಳೂರು, ಅ.4: ರಾಜ್ಯ ಸರ್ಕಾರದ ಮಹತ್ವದ ರಿಯಲ್ ಎಸ್ಟೇಟ್ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿದ್ದು, ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016ರ ಬಿಲ್‌ಗೆ ಅಂಕಿತ ಹಾಕಿಲ್ಲ. ಬಿಲ್ ತಿರಸ್ಕಾರದಿಂದ ರಾಜ್ಯ ಸರ್ಕಾರಕ್ಕೆ ತೀವ್ರ...

Read moreDetails

ಕಾವೇರಿ ನೀರು ರೈತರ ಹಿತಕ್ಕೂ ಬಳಕೆ: ವಿಧಾನಮಂಡಲದಲ್ಲಿ ಪರಿಷ್ಕೃತ ನಿರ್ಣಯ ಅಂಗೀಕಾರ 

ಬೆಂಗಳೂರು, ಅ.3: ಕಾವೇರಿ ಕೊಳ್ಳದ ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂಬ ಈ ಮೊದಲಿನ ನಿರ್ಣಯವನ್ನು ಇಂದು ನಡೆದ ವಿಶೇಷ ವಿಧಾನಮಂಡಲ ಪರಿಷ್ಕರಣೆ ಮಾಡಿ, ರೈತರ ಹಿತ ರಕ್ಷಣೆಗಾಗಿಯೂ ನೀರು ಬಳಸಿಕೊಳ್ಳಲು ನಿರ್ಣಯ ಅಂಗೀಕರಿಸಲಾಯಿತು. ಸುಪ್ರೀಂಕೋರ್ಟ್ ತೀರ್ಪು...

Read moreDetails

ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಸಂಪೂರ್ಣ ಸುದ್ಧಿ

ಸಿದ್ಧರಾಮಯ್ಯನವರಿಗೆ ಇನ್ನಾದರೂ ಸದ್ಬುದ್ದಿ ಬರಬಹುದು: ಯಡಿಯೂರಪ್ಪ ಬೆಳಗಾವಿ, ಅ.3: ಕಾವೇರಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೆ ಬೊಟ್ಟು ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನಾದರು ಸದ್ಬುದ್ದಿ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಧರ್ಮನಾಥ ಭವನದಲ್ಲಿ...

Read moreDetails

ಅ.3-4: ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ

ಬೆಂಗಳೂರು, ಸೆ.30: ಗಡಿ ಜಿಲ್ಲೆ ಬೆಳಗಾವಿಯಲ್ಲಿ  ಅ.3 ಮತ್ತು 4 ರಂದು ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಭೆ ನಡೆಯಲಿದ್ದು, ಪ್ರಮುಖವಾಗಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 3 ರಂದು...

Read moreDetails

ಶೇಮ್! ಶೇಮ್! 500 ಕೋಟಿ ರೂ. ಮೊತ್ತದ ಕಾಂಡೋಮ್ ಸ್ಕ್ಯಾಂನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ?

ಬೆಂಗಳೂರು, ಸೆ.29: ಈಗಾಗಲೇ ಹಲವಾರು ಹಗರಣ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಇಡೀ ರಾಜ್ಯವೇ ತಲೆತಗ್ಗಿಸುವಂತಹ ಹಗರಣವೊಂದನ್ನು ನಡೆಸಿದೆ ಎನ್ನಲಾಗಿದೆ. ಸುಮಾರು 500 ಕೋಟಿ ರೂ. ಮೊತ್ತದಷ್ಟು ಕಾಂಡೋಮ್ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಗುರುತರ...

Read moreDetails
Page 55 of 60 1 54 55 56 60
  • Trending
  • Latest
error: Content is protected by Kalpa News!!