ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಧಾನಿ ಸಂಪೂರ್ಣ ಲಾಕ್‌ಡೌನ್‌ಗೆ ಸಿದ್ಧವಿದ್ದೇವೆ ಎಂದು ದೆಹಲಿ ಆಪ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ದೆಹಲಿ-ಎನ್‌ಸಿಆರ್ ವಲಯಗಳಲ್ಲಿ ವಾಯುಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲೇ ಈ ಹೇಳಿಕೆ ನೀಡಲಾಗಿದ್ದು, ದೆಹಲಿ ಮತ್ತು ಸುತ್ತಮುತ್ತ ರಾಜ್ಯಗಳಲ್ಲಿ ಕೂಡ ಲಾಕ್ ಡೌನ್ ಜಾರಿಗೆ ತಂದರೆ ಪರಿಣಾಮಕಾರಿಯಾಗುತ್ತದೆ ಎಂದು ದೆಹಲಿ ಸರ್ಕಾರ ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ದೆಹಲಿಯ ವಾಯುಮಾಲಿನ್ಯ ಮಟ್ಟವನ್ನು ಗಮನಿಸಿದರೆ, ಲಾಕ್‌ಡೌನ್ ಗಾಳಿಯ ಗುಣಮಟ್ಟದ ಮೇಲೆ ಸೀಮಿತ ಪರಿಣಾಮವನ್ನು ಬೀರಬಹುದಷ್ಟೆ, ಸುತ್ತಮುತ್ತಲ ರಾಜ್ಯಗಳಲ್ಲಿ ಜಾರಿಗೆ ತಂದರೆ ಪರಿಣಾಮಕಾರಿಯಾಗಬಹುದು. ದೆಹಲಿ ಸರ್ಕಾರ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಂಪೂರ್ಣ ಲಾಕ್‌ಡೌನ್‌ನಂತಹ ಕ್ರಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ನೆರೆಯ ರಾಜ್ಯಗಳ ಎನ್‌ಸಿಆರ್ ಪ್ರದೇಶಗಳಾದ್ಯಂತ ಇದನ್ನು ಜಾರಿಗೊಳಿಸಿದರೆ ಲಾಕ್‌ಡೌನ್ ಕ್ರಮವು ಅರ್ಥಪೂರ್ಣವಾಗಿರುತ್ತದೆ ಎಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post