ಕಲ್ಪ ಮೀಡಿಯಾ ಹೌಸ್ | ಸೊರಬ |
ಶಾಸಕ ಎಸ್. ಮಧು ಬಂಗಾರಪ್ಪ Madhu Bangarappa ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳು ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಇದಕ್ಕೂ ಮೊದಲು ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಶಕುಂತಲಮ್ಮ ಬಂಗಾರಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ನಂತರ, ಆಂಜನೇಯ ದೇವಸ್ಥಾನ ವೃತ್ತ ಹಾಗೂ ಶ್ರೀ ರಂಗನಾಥ ದೇವಸ್ಥಾನದ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಕ್ಷೇತ್ರದಿಂದ ಅತ್ಯಧಿಕ ಬಹುಮತದಿಂದ ಆಯ್ಕೆಯಾದ ಮಧು ಬಂಗಾರಪ್ಪ ಅವರಿಗೆ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಸಂಭ್ರಮಾಚರಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಶೀದ್ ಹಿರೇಕೌಂಶಿ, ಪಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಮೆಸ್ತ್ರಿ, ಅತಿಕ್‍ವುರ್ ರೆಹಮಾನ್, ಯು. ಫಯಾಜ್ ಅಹ್ಮದ್, ನಜೀರ್ ಸಾಬ್, ಬಂದಗಿ ಬಸವರಾಜ್ ಶೇಟ್, ಪರಶುರಾಮ ಸಣ್ಣಬೈಲ್, ಕೆ.ಪಿ. ರಾಜೇಶ್, ಸುರೇಶ್ ಭಂಡಾರಿ, ಲಿಂಗರಾಜ ಮಂಚಿ, ರೇವಣಕುಮಾರ್ ಹಿರೇಶಕುನ, ಹೂವಪ್ಪ ಮಂಚಿ, ಸಂತೋಷ್, ಪ್ರಶಾಂತ್, ಗಿರೀಶ್ ಮಂಚಿ, ಸುನೀಲ್ ಮಠದ್, ರವಿ ಕೇಸರಿ ಯಡಗೊಪ್ಪ, ಪಾಂಡು ಕೊಡಕಣಿ, ಸುರೇಂದ್ರ, ಟಿ.ಬಿ. ಮಂಜು, ನವೀನ್ ಸಣ್ಣಬೈಲ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post