ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೃಷ್ಣ ಸರಣಿಖ್ಯಾತಿಯ ಯಶಸ್ವೀ ನಾಯಕ ನಟ ಕೃಷ್ಣ ಅಜಯ್‌ರಾವ್ ನಾಯಕರಾಗಿ ಅಭಿನಯಿಸಿರುವ 26ನೇ ಸಿನಿಮಾ ’ಕೃಷ್ಣ ಟಾಕೀಸ್’ ಇಂದು ರಾಜ್ಯದಾದ್ಯಂತ ತೆರೆಗೆ ಬಂದಿದೆ. ಇನ್ನು ಚಿತ್ರದ ವಿಶೇಷವೆಂದರೆ, ಈ ಸಿನಿಮಾದಲ್ಲಿ ಶಿವಮೊಗ್ಗೆಯ ಮೂವರು ರಂಗಭೂಮಿ ಕಲಾವಿದರು, ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರದ ಕಲಾವಿದ ವೈದ್ಯ ಹೇಳಿದರು.
ಈ ಕುರಿತಂತೆ ಮಾತನಾಡಿರುವ ಅವರು, ಶಿವಮೊಗ್ಗೆಯ ಭಾರತ್ ಸಿನಿಮಾಸ್ ನಲ್ಲಿ 7 ಪ್ರದರ್ಶನ ಹಾಗೂ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ ಎಂದರು.
ಚಿತ್ರದಲ್ಲಿ ತಾವು, ವಿಶ್ರಾಂತ ಪ್ರಾಚಾರ್ಯೆ-ರಂಗ ಕಲಾವಿದೆ ವಿಜಯಲಕ್ಷ್ಮಿ ಹಾಗೂ ಚಲನಚಿತ್ರ ಸಂಘಟಕ – ಕಲಾವಿದ ಶಿವಮೊಗ್ಗ ರಾಮಣ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದ ಅವರು, ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಬಾಲ್ಕನಿ ಸೀಟ್ ನಂ. 13 ಎಂಬ ಅಡಿ ಬರಹ ಕೂಡಾ ಇದೆ. ಈ ಸಿನಿಮಾ ಲಖನೌನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಅಜಯ್ ರಾವ್ ಈ ಸಿನಿಮಾದಲ್ಲಿ ಪತ್ರಕರ್ತರಾಗಿ ಕಾಣಿಸಿಕೊಂಡಿರುವುದು ಗಮನಾರ್ಹ ಎಂದರು.
ಈ ಕೃಷ್ಣ ಟಾಕೀಸ್‌ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ವಿಜಯಾನಂದ್‌ರವರು, ಈ ಹಿಂದೆ ತಮ್ಮ ಮೂಲ ಹೆಸರಾದ ಆನಂದ್ ಪ್ರಿಯ ಹೆಸರಿನಲ್ಲಿ ಕಾಶಿನಾಥ್ ಮುಖ್ಯಭೂಮಿಕೆಯ ’ಓಳ್ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದರು. ನಿರ್ಮಾಪಕ – ನಟಗೋವಿಂದ್‌ರಾಜ್‌ಆಲೂರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂದ ಅವರು, ಶ್ರೀಧರ್ ವಿ. ಸಂಭ್ರಮ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿನ ಮೂರು ಹಾಡುಗಳಿದ್ದು, ಅವುಗಳಿಗೆ ಪ್ರಮೋದ್ ಹಾಗೂ ಆನಂದ ಪ್ರಿಯರವರ ಸಾಹಿತ್ಯವಿದೆ. ಅಭಿಷೇಕ ಕಾಸರಗೋಡು ಅವರ ಛಾಯಾಗ್ರಹಣವಿರುವ ಈ ಚಿತ್ರದ ನಾಯಕಿಯರಾಗಿ ಅಪೂರ್ವ – ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಚಿಕ್ಕಣ್ಣ, ಯಶ್ ಶೆಟ್ಟಿ, ಶಿವಮೊಗ್ಗ ವೈದ್ಯ, ಪ್ರಮೋದ್ ಶೆಟ್ಟಿ, ಶಿವಮೊಗ್ಗ ರಾಮಣ್ಣ, ಶ್ರೀನಿವಾಸ ಪ್ರಭು, ವಿಜಯಲಕ್ಷ್ಮಿ ಮೊದಲಾದವರ ಅಭಿನಯವಿದೆ ಎಂದು ವಿವರಿಸಿದರು.
ನಿರ್ದೇಶಕ ಆನಂದ ಪ್ರಿಯರವರು, ಈ ಕೃಷ್ಣಾ ಟಾಕೀಸ್ ಮೂಲಕ ವಿಜಯಾನಂದ್ ಆಗಿ ಬದಲಾಗಿ, ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಳೆದ 20 ವರ್ಷಗಳಿಂದ ಕನ್ನಡಚಿತ್ರರಂಗದಲ್ಲಿ ಕಥೆಗಾರರಾಗಿ, ಚಿತ್ರಕಥೆಗಾರರಾಗಿ, ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿರುವ ಆನಂದ ಪ್ರಿಯ ಮೂಲತಃರಂಗಭೂಮಿಯಿಂದ ಬಂದವರು. ಬೀದಿ ನಾಟಕಗಳ ಮೂಲಕ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಇವರು, ಸುಪ್ತ ರಂಗತಂಡದಲ್ಲಿ ಈಗಲೂ ಸಕ್ರಿಯರಾಗಿದ್ದಾರೆ.
ತೆಲುಗಿನ ಖ್ಯಾತ ನಿರ್ದೇಶಕ ಏ. ರಾಘವೇಂದ್ರರಾವ್‌ರ ರೇಖೆಗಳು, ಶ್ರೀಕೃಷ್ಣ ಕಲ್ಯಾಣ ಲೀಲೆ ಯ ಚಿತ್ರಗಳಿಗೆ ಕೆಲಸ ಮಾಡುವುದರೊಂದಿಗೆ ಚಿತ್ರರಂಗವನ್ನು ಪ್ರವೇಶಿಸಿದ ಇವರು, ಸಾವಿತ್ರಿ, ಶರದೃತು, ತುಳಸಿ, ಧರ್ಮ ವೀರಕೆಂಪೇಗೌಡ, ವಾತ್ಸಲ್ಯ, ಫೋಟೋಗ್ರಾಫರ್ ಪರಮೇಶಿ, ಸೇರಿದಂತೆ 10ಕ್ಕೂ ಹೆಚ್ಚು ಮೆಗಾ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಸುಮಾರು 45ಕ್ಕೂ ಹೆಚ್ಚು ಚಿತ್ರ ಗಳಿಗೆ ಸಾಹಿತ್ಯ, ಸಂಭಾಷಣೆ, 25ಕ್ಕೂ ಹೆಚ್ಚು ಚಿತ್ರಗಳಿಗೆ ಸಹನಿರ್ದೇಶನ ಮಾಡಿರುವಇವರು, ಪ್ರೇಮ್ (ಜೋಗಿ )ರವರ ಪ್ರೀತಿ ಏಕೆ ಭೂಮಿ ಮೇಲಿದೆ?, ಪುನೀತ್ ರಾಜ್‌ಕುಮಾರ್ ಅಭಿನಯದ ರಾಜ್ ಚಿತ್ರಗಳಿಗೆ ಚಿತ್ರಕಥೆ ಸಂಭಾಷಣೆ ಸಹ ನಿರ್ದೇಶಕರಾಗಿ ಗಮನ ಸೆಳೆದಿದ್ದಾರೆ. ಕಾಶೀನಾಥರ ಕೊನೆಯ ಚಿತ್ರ ಓಳ್ ಮುನ್ಸಮಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಆನಂದಪ್ರಿಯ ಇದೀಗ ವಿಜಯಾನಂದ್ ಹೆಸರಿನಲ್ಲಿ ಕೃಷ್ಣ ಟಾಕೀಸ್ ನಿರ್ದೇಶಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post